2025-26 ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಶಿವಮೊಗ್ಗ ನಗರ ದೈನಂದಿನ ಸಮಸ್ಯೆಗಳತ್ತ ಗಮನ
ಶಿವಮೊಗ್ಗ: ಮಹಾನಗರ ಪಾಲಿಕೆ ಆಯುಕ್ತ ಡಾ. ಕತ್ತಾ ಯೋಗಪ್ಪನವರ್ ಅಧ್ಯಕ್ಷತೆಯಲ್ಲಿ ನಡೆದ 2025-26ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ನಗರದ ಪ್ರಾದೇಶಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ವ್ಯಾಪಕ ಚರ್ಚೆ ನಡೆಯಿತು. ಸಾರ್ವಜನಿಕ ಸಲಹೆಗಳು ಮತ್ತು ಚರ್ಚೆಯ ಪ್ರಮುಖ ಅಂಶಗಳು:ನಾಗರೀಕ ಹಿತಾರಕ್ಷಣಾ ಸಮಿತಿಯ ಕಾರ್ಯದರ್ಶಿ ಡಾ. ಸತೀಶ್ ಕುಮಾರ್ ಶೆಟ್ಟಿ ಮಾತನಾಡಿ, ಸಾರ್ವಜನಿಕರು ಪಲ್ಲಟಗೊಂಡಿಲ್ಲದ ಸಮಸ್ಯೆಗಳ ಬಗ್ಗೆ ಹಲವು ವರ್ಷಗಳಿಂದ ಕೇಳುತ್ತಿದ್ದರೂ, ಯಾವುದೇ ನಿರ್ಧಾರಗಳು ಪೂರಕವಾಗಿಲ್ಲವೆಂದು ಒತ್ತಿದರು. ಅವರು ಹಸಿರೀಕರಣ, ಸ್ವಚ್ಛತೆ, ಪ್ರತ್ಯೇಕ ಮೀನು ಮಾರುಕಟ್ಟೆ ಮತ್ತು ಸ್ಮಶಾನ ಅಭಿವೃದ್ಧಿಗೆ…