ಉತ್ತರ ಪ್ರದೇಶ: 6 ಮದುವೆ ಬಳಿಕ 7ನೇ ಮದುವೆಗೆ ತಯಾರಿ ನಡೆಸಿದ್ದ ಮಹಿಳೆ ಬಂಧನ
ಮದುವೆ ಹೆಸರಿನಲ್ಲಿ ಹಣ, ಒಡವೆಗಳನ್ನು ವಂಚಿಸುತ್ತಿದ್ದ ಮದುವೆ ದಂಧೆಯನ್ನು ಪೊಲೀಸರು ಭೇದಿಸಿದ್ದಾರೆ. ಈಗಾಗಲೇ ಆರು ಮದುವೆಯಾಗಿ ಆರು ಬಾರಿ ವಂಚಿಸಿದ್ದ ಮಹಿಳೆ 7ನೇ ಮದುವೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಮದುವೆಯಾಗಲಿರುವ, ಮದುವೆಯಾಗಲು ಹವಣಿಸುತ್ತಿರುವ ಪುರುಷರನ್ನೇ ಗುರಿಯಾಗಿಸಿಕೊಂಡು ವಂಚಿಸುವ ಮಹಿಳೆಯರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಮದುವೆ ಹೆಸರಿನಲ್ಲಿ ಹಲವರಿಗೆ ವಂಚಿಸಿದ್ದ ಮಹಿಳೆಯರ ಗುಂಪನ್ನು ಪೊಲೀಸರು ಬಂಧಿಸಿದ್ದಾರೆ. ಇದೊಂದು ದೊಡ್ಡ ಜಾಲವಾಗಿದ್ದು, ಇಬ್ಬರು ಮಹಿಳೆಯರಲ್ಲ, ಈ ಜಾಲದ ಭಾಗವಾಗಿದ್ದ ಹಲವು ಪುರುಷರನ್ನು ಪೊಲೀಸರು ಬಂಧಿಸಿದ್ದಾರೆ….