Electric Car: ಟಾಟಾ ಮೋಟರ್ಸ್ ಹೊಸ ದಾಖಲೆ, 1 ಲಕ್ಷ ಎಲೆಕ್ಟ್ರಿಕ್ ಕಾರುಗಳ ಮಾರಾಟ!

By Nagaraj Hiremath

Updated on:

Mr. Ratan Tata - Chairman of Tata Group- Electric Car - EV

ನಮ್ಮ ದೇಶದ ಹೆಮ್ಮೆಯ ಆಟೋಮೊಬೈಲ್ ಸಂಸ್ಥೆಯಾದ ಟಾಟಾ ಮೋಟರ್ಸ್ ನ (Tata Motors) ಕಾರುಗಳು ಅತ್ಯಾಕರ್ಷಕ ವಿನ್ಯಾಸ, ಉತ್ತಮ ಗುಣಮಟ್ಟ ಮತ್ತು ಪರ್ಫಾರ್ಮೆನ್ಸ್, ಗರಿಷ್ಠ ಸುರಕ್ಷತೆ, ಕೈಗೆಟಕುವ ಬೆಲೆ ಹೀಗೆ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಟಾಟಾ ಕಾರುಗಳಿಗೆ ಜನರಿಂದ ಉತ್ತಮ ಬೇಡಿಕೆ ಇದೆ, ಅದರಲ್ಲಿ ಎಲೆಕ್ಟ್ರಿಕ್ ಕಾರುಗಳ (Electric Car) ಪೈಕಿಯೂ ಒಂದು.

ಎಲೆಕ್ಟ್ರಿಕ್ ಕಾರುಗಳ (Electric Car) ಪೈಕಿ ಟಾಟಾ ಮೋಟರ್ಸ್ ಹೊಸ ಕ್ರಾಂತಿ!

ಕಡಿಮೆ ಬೆಲೆಯಲ್ಲಿ ಅತ್ಯಾಕರ್ಷಕ ಕಾರುಗಳನ್ನೂ ನೀಡುವ ಟಾಟಾ ಮೋಟರ್ಸ್ (Tata Motors) ದೇಶ ವಿದೇಶಗಳಲ್ಲಿ ಚಿರಪರಿಚಿತ. ಇದೀಗ ಒಂದು ಲಕ್ಷ ಎಲೆಕ್ಟ್ರಿಕ್ ಕಾರುಗಳನ್ನು (Electric Car) ಮಾರಾಟ ಮಾಡುವ ಮೂಲಕ ಹೊಸ ಮೈಲಿಗಲ್ಲನ್ನು ಸಾಧಿಸಿದೆ.

ಕಳೆದ ಕೆಲ ವರ್ಷಗಳಿಂದ, ಭಾರತದಲ್ಲಿ EV (Electric Vehicle) ಬೇಡಿಕೆಯು ತುಂಬಾ ಜೋರಾಗಿ ಸಾಗಿದೆ. ಇದರಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟರ್ಸ್ (Tata Motors) ಹೊಸ ದಾಖಲೆ ಬರೆದಿದೆ. ಮೊದಲ ಹತ್ತು ಸಾವಿರದಿಂದ ಒಂದು ಲಕ್ಷ ಕಾರುಗಳ ಮಾರಾಟದ ಪ್ರಯಾಣವು ನಿರಂತರವಾಗಿ ಸಾಗಿದೆ. ಒಂದು ಲಕ್ಷ ಕಾರು ಮಾರಾಟ ಪ್ರಯಾಣದ ಅಂತಿಮ 50 ಸಾವಿರ ಮಾರಾಟವು ಕೇವಲ 9 ತಿಂಗಳಲ್ಲಿ ದಾಖಲಾಗಿದೆ. ಈ ವಿಶೇಷ ಸಂದರ್ಭವನ್ನು ಟಾಟಾ ಮೋಟರ್ಸ್ ಅದ್ಭುತವಾದ ಡ್ರೋನ್ ಪ್ರದರ್ಶನದೊಂದಿಗೆ ಬಾನಂಗಳವನ್ನು ಬೆಳಗುವ ಮೂಲಕ ಆಚರಿಸಿತು.

Mr. Shailesh Chandra - Managing Director, Tata Motors Passenger Vehicles Ltd. and Tata Passenger Electric Mobility Ltd. - Electric Car
Mr. Shailesh Chandra – Managing Director, Tata Motors Passenger Vehicles Ltd. and Tata Passenger Electric Mobility Ltd.

ಈ ಮೂಲಕ ಮಾತನಾಡಿದ ಟಾಟಾ (TATA) ಮೋಟರ್ಸ್ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ ಭಾರತದಲ್ಲಿ ಒಂದು ಲಕ್ಷ EV ಕಾರುಗಳ ಮಾರಾಟ ಒಂದು ಪ್ರಮುಖ ಮೈಲಿಗಲ್ಲು, ಇದನ್ನು ಆಚರಿಸುತ್ತಿರುವ ನಮಗೆ ಇಂದಿನ ದಿನವು ಒಂದು ಮಹತ್ವದ ಸಮಾರಂಭವಾಗಿದೆ ಎಂದು ಹೇಳಿದ್ದಾರೆ. ಇದು ವಾಹನಗಳಿಂದ ಹೊರಸೂಸುವ ಇಂಗಾಲವನ್ನು ಶೂನ್ಯದ ಕಡೆಗೆ ಭಾರತವನ್ನು ಕರೆದೊಯ್ಯುವ ತಂತ್ರಜ್ಞಾನ ಅಂಗೀಕರಿಸಲು ಸಹಾಯ ಮಾಡಿದೆ. ತಮ್ಮ EV ಗ್ರಾಹಕರು, ಸರ್ಕಾರ, ಹೂಡಿಕೆದಾರರು, tata uniEVerse Ecosystem ಕಂಪನಿಗಳಿಗೆ, ಅವರ ನಿರಂತರ ಬೆಂಬಲಕ್ಕಾಗಿ ನಾನು ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಒಟ್ಟಾಗಿ ನಾವೆಲ್ಲರೂ ಭಾರತವನ್ನು ಹಸಿರು ಚಲನಶೀಲತೆಯತ್ತ ಮುನ್ನಡೆಸುತ್ತಿದ್ದೇವೆ ಎಂದರು.

ಇಂತಹ ಹೊಸ ತಂತ್ರಜ್ಞಾನಗಳು ಅನೇಕ ವಿಭಾಗಗಳಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ನಮ್ಮ ಸುತ್ತಮುತ್ತಲಿನ ವಾಯುವಿನ ಮಾಲಿನ್ಯವನ್ನು ಸುಧಾರಿಸುತ್ತದೆ, ತೈಲದ ಮೇಲಿನ ಅವಲಂಬನೆಯನ್ನು ನಿವಾರಿಸುತ್ತದೆ. EV ಮತ್ತು ಅದರ ಬಿಡಿಭಾಗಗಳ ಉತ್ಪಾದನೆಯ ಪ್ರಮುಖ ಕೇಂದ್ರವಾಗಿ ಭಾರತ ಹೊರಹೊಮ್ಮಲಿದೆ. ಇದರಿಂದ ವೇಗವಾಗಿ ಪ್ರಗತಿ ಸಾಧಿಸುತ್ತಿರುವ ಪರಿಸರ ವ್ಯವಸ್ಥೆಯನ್ನು ಪ್ರತಿನಿಧಿಸುತ್ತದೆ, ಈ ಮೂಲಕ ಗ್ರಾಹಕರು, ಪೂರೈಕೆದಾರರು, ಚಾರ್ಜಿಂಗ್ ಸಂಪನ್ಮೂಲಗಳ ಪ್ರತಿಸ್ಪರ್ದಿಗಳು ಮತ್ತು ಹೂಡಿಕೆದಾರರಿಗೆ ಹೊಸ ತಂತ್ರಜ್ಞಾನಗಳ ಕಡೆಗೆ ಮುಖ ಮಾಡಲು ಮತ್ತು ಉದ್ಯಮದಲ್ಲಿ ಸಾಮರ್ಥ್ಯವನ್ನು ನಿರ್ಮಿಸಲು ವಿಶ್ವಾಸ ನೀಡುತ್ತದೆ ಎಂದು ಶೈಲೇಶ್ ಚಂದ್ರ ಹೇಳಿದ್ದಾರೆ.

ವಾಯುಮಾಲಿನ್ಯ ಹೆಚ್ಚಾಗುತ್ತಿರುವ ಈ ಸಮಯದಲ್ಲಿ, ಕಡಿಮೆ ಇಂಗಾಲದ ಹೊರಸೂಸುವಿಕೆ ಮತ್ತು ಮಾಲಿನ್ಯದ ಯುಗಕ್ಕೆ ನಾಂದಿ ಹಾಡುವಲ್ಲಿ ಗ್ರಾಹಕರ ಸಾಮೂಹಿಕ ಪ್ರಯತ್ನಗಳು ಸುಮಾರು 2,19,432 ಟನ್ ಇಂಗಾಲದ ಡೈಆಕ್ಸೈಡ್ (CO2) ಹೊರಸೂಸುವಿಕೆಯನ್ನು ಕಡಿಮೆಮಾಡಿದ್ದು, ಇದು ಪರಿಸರದ ಮೇಲೆ ಮಹತ್ತರ ಧನನಾತ್ಮಕ ಪರಿಣಾಮವವನ್ನು ಬೀರಿದೆ. ಆರ್ಥಿಕ ದೃಷ್ಟಿಕೋನದಿಂದ ನೋಡುವುದಾದರೆ, ಟಾಟಾ EV ಹೊಂದಿದ ಮಾಲೀಕರು ತಮ್ಮ ಒಟ್ಟಾರೆ ಇಂಧನ ವೆಚ್ಚದಲ್ಲಿ ಸುಮಾರು 7 ಶತಕೋಟಿ ರೂ. ಗಳ ಉಳಿತಾಯ ಮಾಡಿದ್ದಾರೆ. ಈ ಉಳಿತಾಯವು ಭವಿಷ್ಯದ ಪರ್ಯಾಯ ಇಂಧನಮೂಲದ ಕಡೆಗೆ ಹೆಚ್ಚಿನ ಗಮನ ನೀಡಲು ಸಹಾಯಕವಾಗಿದೆ ಮತ್ತು ಹೊಸ ಹೊಸ ತಂತ್ರಜ್ಞಾನದ ಅನ್ವೇಷಣೆಗೆ ದಾರಿಯಾಗಲಿದೆ.

Tata Electric Cars - Tata Avinya - Tata EVision Electric SUV

ಈಗಾಗಲೇ ಟಾಟಾ ಮೋಟರ್ಸ್ ತನ್ನ 3 ಹಂತದ EV ತಂತ್ರಗಾರಿಕೆಯನ್ನು ಘೋಷಿಸಿದೆ. ಗ್ರಾಹಕರ ವಿವಿಧ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಹಲವಾರು ರೀತಿಯ ಕಾರುಗಳು ಹೊಸ ವಿನ್ಯಾಸದೊಂದಿಗೆ ಗ್ರಾಹಕರ ಕೈಗೆಟಕುವ ದರದಲ್ಲಿ ನೀಡಲು ಕಂಪನಿ ಯೋಜನೆಯೊಂದನ್ನು ರೂಪಿಸಿದೆ. ಕಂಪನಿಯು ಈಗಾಗಲೇ 2023 ರಲ್ಲಿ ನಡೆದ ಆಟೋ ಎಕ್ಸ್ ಪೋ ದಲ್ಲಿ ಭವಿಷ್ಯದ ಪರಿಕಲ್ಪನೆಗಳಾದ – Curvv, Harrier EV, Sierra EV ಮತ್ತು Avinya ಗಳನ್ನು ಪ್ರದರ್ಶಿಸಿದ್ದು, ಜನರ ಮೆಚ್ಚುಗೆಗಳಿಗೂ ಪಾತ್ರವಾಗಿದೆ. ಭಾರತದಲ್ಲಿ EV ಯಿಂದ ಹೊಸ ವಿಭಾಗಳು ತೆರೆದುಕೊಳ್ಳಲಿದೆ. ಎಲೆಕ್ಕ್ಟ್ರಿಕ್ ವಾಹನಗಳಿಗೆ ಬಹುಮುಖ್ಯವಾಗಿ ಬೇಕಾದ ಚಾರ್ಜಿಂಗ್ ಸ್ಟೇಷನ್ ಗಳು ದೇಶದ ಮೂಲೆ ಮೂಲೆಗಳಿಗೆ ವ್ಯಾಪಿಸುವ ಮೂಲಕ ತಡೆರಹಿತ ಚಲನೆಗೆ ಸಹಕಾರಿಯಾಗಲಿದೆ. ಈ ಯೋಜನೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆದಾರರು ಮುಂದೆ ಬರಬೇಕಿದೆ, ಹಾಗೆಯೇ ದೇಶದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಾಗಬೇಕಿದೆ.

Nagaraj Hiremath

Leave a Comment